ಕ್ರಿ.ಶ.1580 ರಿಂದ ಕ್ರಿ.1627 ರ ಕಾಲದಲ್ಲಿ ಬಿಜಾಪುರ ಆದಿಲ್ ಶಾಹಿ ಮನೆತನದ ಎರಡನೇ ಇಬ್ರಾಹಿಂ ಆದಿಲ್ ಶಾಹ ಮತ್ತು ಆತನ ಹೆಂಡತಿಯ ಸಮಾಧಿ ಇಲ್ಲಿದೆ. ಈ ಕಟ್ಟಡವನ್ನು ಮಲಿಕ್ ಸಂದಾಲ ಎಂಬ ವಾಸ್ತುಶಿಲ್ಪಿಯು ಕಟ್ಟಿದ್ದಾನೆ. ದಕ್ಷಿಣದ ತಾಜ್ ಮಹಲ್ ಎಂದೇ ಇದಕ್ಕೆ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಈ ಕಟ್ಟಡ ಬಲಭಾಗದಲ್ಲಿ ದೊರೆ ಇಬ್ರಾಹಿಂನ ಗೋರಿಯು ನಾಲ್ಕು ಗೋಪುರಗಳಿಂದ ಕೂಡಿದೆ ಹಾಗೂ ಒಳಗಡೆ ಐದು ಕಮಾನುಗಳನ್ನು ಹೊಂದಿರುವ ಪ್ರಾರ್ಥನಾ ಮಂದಿರವಿದೆ. ಒಳಾಂಗಣವು ಸುಂದರ ಹೂವಿನ ಚಿತ್ರಗಳಿಂದ ಅಲಂಕೃತಗೊಂಡಿದೆ. ಇದಲ್ಲದೇ ಈ ಕಟ್ಟಡವು ಸುಂದರ ಹೂತೋಟದಲ್ಲಿ ಇರುವುದರಿಂದ ಪ್ರವಾಸಿಗರಿಗೆ ಐತಿಹಾಸಿಕ ಹಿನ್ನೆಲೆಯೊಂದಿಗೆ ಸೌಂದರ್ಯ ಕೂಡ ಸವಿಯಬಹುದಾಗಿದೆ. ಈ ಕಟ್ಟಡವು ಐಹೊಳೆ, ಪಟ್ಟದಕಲ್ಲು ವಾಸ್ತುಶೈಲಿಯನ್ನೂ ಕೂಡ ಹೊಂದಿದೆ. ಇಲ್ಲಿಗೆ ಬರುವ ವಿದೇಶಿ ಮತ್ತು ಸ್ವದೇಶಿ ಪ್ರವಾಸಿಗರು ಪ್ರವೇಶ ಶುಲ್ಕ ನೀಡಬೇಕಾಗುತ್ತದೆ.ವಿದೇಶಿಗರು 100 ರೂ. ಪ್ರವೇಶ ಶುಲ್ಕ ನೀಡಬೇಕಾಗುತ್ತದೆ. ದಕ್ಷಿಣ ಏಷ್ಯಾ ಪ್ರಜೆಗಳಿಗೆ ೫ ರೂಪಾಯಿ ಶುಲ್ಕವಿದೆ. ( ( ) ( )) }} == ಉಲ್ಲೇಖಗಳು ==